Friday, October 30, 2009
ಹೇಗಿದ್ದೆ ಸುಮ್ಮನೆ - ಎಲ್ಲಿದೆ ನಿಮ್ಮನೆ
ಮನದಾಳದಿಂದ ಎಂದೂ ಮರೆಯಾಗದ ಗೆಳತಿಯ ನೆನಪಲಿ - ಕವಿತಾ
ಯಾರನೆ ಕಂಡರೂ ನೀನೇ ಅನ್ನುವ ಭಾವನೆಯ ಅಲೆಗಳಿಗೆ ಏನು ಹೆಸರಿಡಲಿ ಬಡಿಯುತಿರಲಿ ಆ ಅಲೆಗಳು ಎಂದೂ ಮನದ ಕಡಲಿನ ಪ್ರೀತಿ ತೀರದಲಿ
ಅನುಮಾನವಿದೆ ಏಕೋ ನಾ ಕಾಣೋ ಕನಸುಗಳ ಮೇಲೆ ಹೇಗೇಕೆ ಆಗುತಿದೆ
ಮತ್ತೆ ಮತ್ತೆ ಕಂಡು ಮಾಯವಗುವೆಯೇಕೆ ಕೂಡಿ ನನ್ನಲೇ ಉಳಿಯಬಾರದೇಕೆ
ಆಗುತ್ತಿಲ್ಲ ಕೇಳದಿರಲು ನನ್ನಾಣೆ ಯಾರೆಂದು ನೀ ನನಗೆ ಅನುದಿನ
ನಿನ್ನ ಸಬೂಬು ಕೇಳುವ ಆಸೆಯಲೇ ಉಸಿರಾಡುತಿರುವೆ ಪ್ರತಿಕ್ಷಣ
ಕೊರೆಯುತಿದೆ ಮೂರು ಹೊತ್ತು ನೆನಪು ಅನಾಮಿಕಳು ಹೇಗಾಗುವೆ
ಮಳೆಗಾಲ ಛಳಿಗಾಲ ಬೇಸಿಗೆಗಾಲ ಇರಬೇಕು ನಿನ್ನ ಜೊತೆಗೆ
ನೀ ಕಾಡುವ ಎಲ್ಲೆಗೆ ಮಿತಿಯೆಲ್ಲಿದೆ ಇದ ಏನೆಂದು ನಾ ತಿಳಿಯಲಿ
ಎಂದೂ ಜೊತೆಯಲಿರುವೆ ಅನ್ನೋ ಬ್ರಮೆಯು ಮಾತ್ರ ಅಳಿಯದಿರಲಿ
ಚೆಂದದ ಕಂಗಳನು ಮೋಹಕ ಅಂದವನು ಕಂಡೂ ಹೇಗಿದ್ದೆ ಸುಮ್ಮನೆ
ಅರಸುತ ಬರಲೆಂದೆರೆ ನಿಜವಾಗಿಯು ಗೊತ್ತಿಲ್ಲ ಗೆಳತಿ ಎಲ್ಲಿದೆ ನಿಮ್ಮನೆ
ye hero... en super kavite, en romantic bhaavane...
really i dont hav words to express..
ee life nalli dual charecter anisutte kano..
software engineer and a romantic fellow..
u r simply great