Wednesday, December 9, 2009

ಅರಿಯೇ ನಾನು . . ಕಾರಣ ನೀನು  

ಅರಿಯೇ ನಾನು . . ಕಾರಣ ನೀನು

ನಿನ ಸ್ಪರ್ಶದಿ ಕನಸುಗಳು ಗರಿ ಬಿಚ್ಚಿ ಹಾರಾಡಿವೆ
ಕಣ್ಣಂಚಲಿ ಕಾಡಿದ ಆಸೆಯ ಪರಿಯೇನು ಅರಿಯೇ ನಾನು . . ಕಾರಣ ನೀನು
ನಿನ ನೋಟದಿ ಬಾವಗಳು ಕುಣಿ ಕುಣಿದು ನಲಿದಾಡಿವೆ
ಮನದಾಳದಿ ಮೂಡಿದ ಒಲವಿನ ಪರಿಯೇನು ಅರಿಯೇ ನಾನು . . ಕಾರಣ ನೀನು

ಅಲೆದಾಡುವ ದಾರಿಯಲಿ ನೂರಾರು ತಿರುವುಗಳು
ಪ್ರತಿಯೊಂದರಲೂ ಕೈ ಬೀಸಿ ನೀನೇ ನನ್ನ ಕರೆದಿರುವೆ
ಎದೆಯಲಿ ಮನೆ ಮಾಡಿವೆ ಸಾವಿರಾರು ಬಯಕೆಗಳು
ಬಂದು ಸೇರು ನೀ ನನ್ನ ಇದೆಲ್ಲ ಯಾಕೆ ನೀ ಹೇಳು

ನಿನ ಊರಲೇ ಕಾಯುತಲಿದ್ದರೂ ಬರೆಯಾ ನೀನು .. ಹೇಳು ಜಾನು

ನಾನೋಡುವ ಚಿತ್ತಾರದಲಿ ನೂರೆಂಟು ಬಣ್ಣಗಳು
ಅದರಿಂದಲೂ ನಗುವನು ಚೆಲ್ಲಿ ನೀನೇ ನನ್ನ ಕಾಡಿರುವೆ
ತುಟಿಯಂಚಲಿ ಜನಿಸಿವೆ ಕೋಟಿ ಕೋಟಿ ಮಾತುಗಳು
ಮೌನವೇಕೆ ನೀ ಕೇಳು ಎಂದೆಂದೂ ನೀನೇ ನನ್ನವಳು

ನಿನ ಎದುರಲೇ ಬಂದುನಿಂತರೂ ನೋಡೆಯಾ ನೀನು .. ಹೇಳು ಜಾನು  

What next?

You can also bookmark this post using your favorite bookmarking service:

Related Posts by Categories



2 comments: to “ ಅರಿಯೇ ನಾನು . . ಕಾರಣ ನೀನು


  •  

    ಈ ಕವಿತೇನ ಹುಡುಗಿರು ಏನಾದ್ರು ಓದಿದರೆ , ಆ ನಿನ್ನ ಜಾನು ತಾವೇ ಆಗಬೇಕಿತ್ತು ಅಂತ ಪೆಚಾಡ್ತಾರೆ. thats for sure!
    ತುಂಬಾ ನೆ ಚೆನ್ನಾಗಿದೆ ಕಣೋ.. ನಿನ್ನ ಭಾವನೆ ಗಳನ್ನ ಕವಿತೆ ಮೂಲಕ ತೇಲಿ ಬಿಟ್ಟಿದಿಯ , ಬೇಗ ಆ ಅಲೆ ಗಳು ಜಾನು ನ ತಲುಪಲಿ ಅಂತ WISH ಮಾಡ್ತೀನಿ.. Wish U all the Best


  •  

    er maga