Wednesday, December 9, 2009

ಅರಿಯೇ ನಾನು . . ಕಾರಣ ನೀನು  

ಅರಿಯೇ ನಾನು . . ಕಾರಣ ನೀನು

ನಿನ ಸ್ಪರ್ಶದಿ ಕನಸುಗಳು ಗರಿ ಬಿಚ್ಚಿ ಹಾರಾಡಿವೆ
ಕಣ್ಣಂಚಲಿ ಕಾಡಿದ ಆಸೆಯ ಪರಿಯೇನು ಅರಿಯೇ ನಾನು . . ಕಾರಣ ನೀನು
ನಿನ ನೋಟದಿ ಬಾವಗಳು ಕುಣಿ ಕುಣಿದು ನಲಿದಾಡಿವೆ
ಮನದಾಳದಿ ಮೂಡಿದ ಒಲವಿನ ಪರಿಯೇನು ಅರಿಯೇ ನಾನು . . ಕಾರಣ ನೀನು

ಅಲೆದಾಡುವ ದಾರಿಯಲಿ ನೂರಾರು ತಿರುವುಗಳು
ಪ್ರತಿಯೊಂದರಲೂ ಕೈ ಬೀಸಿ ನೀನೇ ನನ್ನ ಕರೆದಿರುವೆ
ಎದೆಯಲಿ ಮನೆ ಮಾಡಿವೆ ಸಾವಿರಾರು ಬಯಕೆಗಳು
ಬಂದು ಸೇರು ನೀ ನನ್ನ ಇದೆಲ್ಲ ಯಾಕೆ ನೀ ಹೇಳು

ನಿನ ಊರಲೇ ಕಾಯುತಲಿದ್ದರೂ ಬರೆಯಾ ನೀನು .. ಹೇಳು ಜಾನು

ನಾನೋಡುವ ಚಿತ್ತಾರದಲಿ ನೂರೆಂಟು ಬಣ್ಣಗಳು
ಅದರಿಂದಲೂ ನಗುವನು ಚೆಲ್ಲಿ ನೀನೇ ನನ್ನ ಕಾಡಿರುವೆ
ತುಟಿಯಂಚಲಿ ಜನಿಸಿವೆ ಕೋಟಿ ಕೋಟಿ ಮಾತುಗಳು
ಮೌನವೇಕೆ ನೀ ಕೇಳು ಎಂದೆಂದೂ ನೀನೇ ನನ್ನವಳು

ನಿನ ಎದುರಲೇ ಬಂದುನಿಂತರೂ ನೋಡೆಯಾ ನೀನು .. ಹೇಳು ಜಾನು  

Friday, October 30, 2009

ಹೇಗಿದ್ದೆ ಸುಮ್ಮನೆ - ಎಲ್ಲಿದೆ ನಿಮ್ಮನೆ  

ಮನದಾಳದಿಂದ ಎಂದೂ ಮರೆಯಾಗದ ಗೆಳತಿಯ ನೆನಪಲಿ - ಕವಿತಾ

ಯಾರನೆ ಕಂಡರೂ ನೀನೇ ಅನ್ನುವ ಭಾವನೆಯ ಅಲೆಗಳಿಗೆ ಏನು ಹೆಸರಿಡಲಿ
ಬಡಿಯುತಿರಲಿ ಆ ಅಲೆಗಳು ಎಂದೂ ಮನದ ಕಡಲಿನ ಪ್ರೀತಿ ತೀರದಲಿ
ಅನುಮಾನವಿದೆ ಏಕೋ ನಾ ಕಾಣೋ ಕನಸುಗಳ ಮೇಲೆ ಹೇಗೇಕೆ ಆಗುತಿದೆ
ಮತ್ತೆ ಮತ್ತೆ ಕಂಡು ಮಾಯವಗುವೆಯೇಕೆ ಕೂಡಿ ನನ್ನಲೇ ಉಳಿಯಬಾರದೇಕೆ


ಆಗುತ್ತಿಲ್ಲ ಕೇಳದಿರಲು ನನ್ನಾಣೆ ಯಾರೆಂದು ನೀ ನನಗೆ ಅನುದಿನ
ನಿನ್ನ ಸಬೂಬು ಕೇಳುವ ಆಸೆಯಲೇ ಉಸಿರಾಡುತಿರುವೆ ಪ್ರತಿಕ್ಷಣ
ಕೊರೆಯುತಿದೆ ಮೂರು ಹೊತ್ತು ನೆನಪು ಅನಾಮಿಕಳು ಹೇಗಾಗುವೆ
ಮಳೆಗಾಲ ಛಳಿಗಾಲ ಬೇಸಿಗೆಗಾಲ ಇರಬೇಕು ನಿನ್ನ ಜೊತೆಗೆ

ನೀ ಕಾಡುವ ಎಲ್ಲೆಗೆ ಮಿತಿಯೆಲ್ಲಿದೆ ಇದ ಏನೆಂದು ನಾ ತಿಳಿಯಲಿ
ಎಂದೂ ಜೊತೆಯಲಿರುವೆ ಅನ್ನೋ ಬ್ರಮೆಯು ಮಾತ್ರ ಅಳಿಯದಿರಲಿ
ಚೆಂದದ ಕಂಗಳನು ಮೋಹಕ ಅಂದವನು ಕಂಡೂ ಹೇಗಿದ್ದೆ ಸುಮ್ಮನೆ
ಅರಸುತ ಬರಲೆಂದೆರೆ ನಿಜವಾಗಿಯು ಗೊತ್ತಿಲ್ಲ ಗೆಳತಿ ಎಲ್ಲಿದೆ ನಿಮ್ಮನೆ

Thursday, October 22, 2009

ಯಾರೇ ನೀ ...  


ಕಣ್ಣಿಗೆ ಕಾಣದಿದ್ದರೂ ನನ್ನೇ ಮತ್ತೆ ಮತ್ತೆ ಇಣುಕಿ ನೋಡುವವಳೇ
ಎಷ್ಟು ನೆನೆದರೂ ಚಿತ್ರವಾಗಿ ಮೂಡಿ ಮೂಡಿ ಮರೆಯಾದವಳೇ
ಕರೆಯದಿದ್ದರೂ ನನ್ನೆಡೆಗೆ ತಿರುಗಿ ತಿರುಗಿ ನೋಟ ಬೀರುವವಳೇ
ಕೇಳದಿದ್ದರೂ ಹತ್ತಿರ ಬಂದು ಬಂದು ಮಾತನಾಡಿಸುವವಳೇ . . . . . ಯಾರೇ ನೀ

ಕಾಯುತಿರುವೆ ತೋರು ನಿನ್ನ ಅಂದದ ಮೊಗವನು
ಕೊರಗಿತಿರುವೆ ನೋಡಲು ನಿನ್ನ ಚೆಂದದ ನಗುವನು
ಪಡೆಯಬೇಕು ಸವೆಯಲು ನಿನ್ನ ಒಲುಮೆಯ ಒಲವನು
ನೋಡಬೇಕು ಪ್ರೀತಿತುಂಬಿದ ನಿನ್ನ ನಲುಮೆಯ ಕಂಗಳನು . . . . . ಯಾರೇ ನೀ

ಗೊತ್ತಾಗದೇನೆ ನನ್ನ ಮನಸನು ಕದ್ದ ಕಳ್ಳಿಯೆ
ಮಿಂಚಾಗಿ ಒಳಗೆಯೇ ಮಿಂಚಿ ನಿಂತ ಮಳ್ಳಿಯೆ
ನನಗಾಗಿ ಬಾನಿಂದ ಇಳಿದು ಬಂದ ಊರ್ವಶಿಯೇ
ಎಂದೆಂದೂ ನನ್ನ ಪಾಲಿನ ಪ್ರೀತಿ ದೇವತೆಯೇ . . . . . ಯಾರೇ ನೀ

Thursday, October 15, 2009

ಜೀವ ಜೀವನ - ನೀನೇ . . . . .  


ಎದುರಲಿ ಇಲ್ಲದೆ ಅನುದಿನ ನಾ ನಿನ್ನ ನೋಡುವೆನು
ಮರೆವು ಇದ್ದರೂ ಪ್ರತಿ ಕ್ಷಣ ನಾ ನಿನ್ನ ನೆನೆವೆನು
ಮಾತುಗಳೇ ಇಲ್ಲದೆ ಕಣ್ಣಲ್ಲೇ ಎಲ್ಲ ಅರ್ಥವಾಗಿದೆ
ಹಸಿವು ಇದ್ದರೂ ನಿನ್ನೊಲವೆ ಎನಗೆ ಉಸಿರಾಗಿದೆ


Wednesday, October 14, 2009

ಮೊದಲ ಕವನ ...  

ಇಂದು ನನ್ನ ಮೊದಲ ಕವನ ಬರೆಯುತಿರುವೆ
ಅಕ್ಷರಗಳ ಸಾಲೇ ಹರಿದು ಬರುತಿವೆ
ಬಂದು ಹರಸಿ ಅಂತ ನಿಮ್ಮ ಕೇಳುತಿರುವೆ
ಅದರ ಎಣಿಕೆಯಲ್ಲೇ ಕ್ಷಣಗಳ ಕಳೆಯುತಿರುವೆ ...